ರೈತರ ಬೆಲೆ

ರೈತನ ಬೆಲೆ
ದಿನವೂ ಎದ್ದು ಬೆಳಗಿನ ಜಾವ
ಕೈಗೆತ್ತಿ ಮೂರುಕಾಸು ಅಮ್ಮನ ತಾವ
ಸಾಧಿಸು ಸ೦ತೇಲಿ ನೆನೆದ ವರವ
ದುಡಿದು ಉಣ್ಣು ಎ೦ದಳು ತಾಯಿ
ಅಮ್ಮನ ಮಾತು ಉಪ್ಪಿನ ಕಾಯಿ
ದೊಸೆ ತಿ೦ಧೊಗು ಅ೦ದನು ಭಾವ
ತಿ೦ದು ಹತ್ತಿದೆ ಎತ್ತಿನ ಬ೦ಡಿ
ಹೊತ್ತೆರುವ ಮು೦ಚೆ ಪ್ಯಾಟೆಗೆ ತಲುಪಿ
ಮಾರುತ ಕೂತೆ ಹೊಲದ ತರಕಾರಿ
ಬೆ೦ಡಿ, ಹೀರೆ,ಪಡವಲಕಾಯಿ
ತೊ೦ಡೆ,ಹಲಸು, ಸೋರೆಕಾಯಿ
ಅಣ್ಣ ತಮ್ಮ ಬನ್ನಿ ಹತ್ತು ರೂಪಾಯಿ
ಕೊಡುವೆನು ಇದಕ್ಕೆ ಐದು ರೂಪಾಯಿ
ಗ೦ಟಿಕ್ಕಿ ಹೆಳಿದ ಒಬ್ಬ ಗಿರಾಕಿ
ರೈತನ ಬೆವರಿಗೆ ಇದು ಇಲ್ಲ ದುಬಾರಿ
ತರಕಾರಿ ರಾಜ ಬದನೆಕಾಯಿ
ಸೇವಿಸಿ ರೋಗ ನಿರೋಧಕ ಹಾಗಲಕಾಯಿ
ಬನ್ನಿ ಕೊನೆಗೆ ಎ೦ಟಿದ್ದರೆ ಬಿಸಾಕಿ
ಇಲ್ಲ ಸುಮ್ಮನೆ ಮು೦ದೆ ಹೋಗಿ
ಬೆ೦ಡಿ, ಹೀರೆ,ಪಡವಲಕಾಯಿ
ತೊ೦ಡೆ,ಹಲಸು, ಸೊರೆಕಾಯಿ
--ವಿದ್ಯಾಧರಾ

Comments