ನಾನು ಮೆಚ್ಚಿದ ಕಾವ್ಯ



ನಾನು ಮೆಚ್ಚಿದ ಕಾವ್ಯ

ನನಗೆ ಕುವೆಂಪು,ಅಡಿಗ,ಬೆಂದ್ರೆ ಮತ್ತು ಸಿದ್ದಲಿಂಗಯ್ಯರವರ ಅನೇಕ ಕವನಗಳು ಇಷ್ಟ . ಮಿರ್ಜಾ ಗಾಲಿಬರವರ ಶಾಯರಿಗಳು ನನಗೆ ಯಾವೊತ್ತು ರಮಿಸುತ್ತವೆ. ಇತ್ತೀಚೆಗೆ ನನ್ನ ಗಮನ ಸೆಳೆದ ಕವನ ಸಂಕಲನ ವೆಂದರೆ ಡಾ.ಕುಮಾರ ವಿಶ್ವಾಸರವರ ಹಿಂದಿಯ ‘ಕೊಯಿ ದಿವಾನಾ ಕೆಹತಾ ಹೈ.ಕೊಯಿ ಪಾಗಲ’. ಆದರೆ ವಿಷೇಶವಾಗಿ ಮನೆಮುಟ್ಟಿದ್ದು ಡಾ.ಕೆ.ಎಸ್. ನರಸಿಂಹಸ್ವಾಮಿಯವರ ‘ದುಂಡುಮಲ್ಲಿಗೆ’ ಎಂಬ ಪಂಪ ಪ್ರಶಸ್ತಿ ವಿಜೇತ ಕೃತಿ.ಅದು ನಲವತ್ತಮೂರು ಕವನಗಳ ಸಂಕಲನ. ಅದರಲ್ಲಿರುವ ಕವನಗಳನ್ನ ಓದುತ್ತಿದ್ಜರೆ ನನಗೇನೊ ರೊಮಾಂಚನವಾಗುತ್ತದೆ. ಮೊದಲನೆ ಕವನ ‘ಸಂಗಮ’ ಓದುಗರ ಶ್ರಂಗಾರ ಚಿತ್ತವನ್ನು ನಯವಾಗಿ ಅರಳಿಸಿ, ‘ಅಕ್ಷಯ ಯುಗಾದಿ’ ಕಬ್ಬನ ಪಾರ್ಕಿನ ಪ್ರತಿಭಟನೆಯಿಂದ ಸೀರೆಯಂಗಡಿಗೆ ಕರೆದೊಯ್ಯುತ್ತದೆ. ನನನ್ನು ಸೆರೆ ಹಿಡಿದು ಪದೆ ಪದೆ ಓದಲು ಕಾಡುವ ಕವನಗಳೆಂದರೆ ‘ನೋವು ನಲಿವು’, ‘ನಕ್ಕು ಬಿಡು’ ಮತ್ತು ‘ಒಂದು ಪಯಣ’. ನಾನು ಓದಿರುವ ಅನೇಕ ಕನ್ನಡ, ಇಂಗ್ಲೀಷ, ಹಿಂದಿ ಕವನ ಸಂಗ್ರಹಳಲ್ಲಿ ಈ ಮೂರು ಕವನಗಳು ನನ್ನ ಕಲ್ಪನೆಗೆ ಮೀರಿವೆ.ನಕ್ಕುಬಿಡು ಕವನದ  ‘ನಕ್ಕ ಹಾಗೆ ನಟಿಸಬೇಡ,ನಕ್ಕುಬಿಡು ಸುಮ್ಮನೆ’ ಮತ್ತು ಒಂದು ಪಯಣದ ‘ಎಲ್ಲಿಂದಲೊ ಯಾರೊ ಕಾಣೆ ಪತ್ರವೊಂದು ಬರೆದರು’ ಸಾಲುಗಳ ಪ್ರಾಸದಿಂದ ಕೂಡಿದ ಸಂಗೀತ ಹಿತವಾಗಿ ಮೂಡಿಬಂದಿದೆ.ಅವುಗಳಲ್ಲಿ ಮೂಡಿ ಬಂದ ಭಾವನಾತ್ಮಕ ಚಿತ್ರಣ ಸಹಜ ನೈಜತೆಯನ್ನು ಬಿಂಬಿಸಿ ಪ್ರಾಸದ ರಾಗವಿನ್ಯಾಸ ಮನಮುಟ್ಟುತ್ತದೆ.ಕವಿಯು ರೂಪಕ ಮತ್ತು ಉಪಮೆಗಳನ್ನು ಸರಾಗವಾಗಿ ಉಪಯೋಗಿಸಿ ಕಾವ್ಯ ನಿರ್ಮಿಸಿದ್ದಾರೆ. ಕವನದ ಸಾಲುಗಳಲ್ಸಿ ನೈಜ ಮತ್ತು ಸಾಮಾನ್ಯ ಕಾಲ್ಪನಿಕ ಬಿಂಬ(image) ಒಂದು ವಿಷಯದ ಘಟನೆಯ ಸಾರಾಂಶ ಕವನದಲ್ಲಿ  ಅತ್ಯುತ್ಕ್ರಷ್ಟದಿಂದ ಅಭಿವ್ಯಕ್ತಿಸುತ್ತದೆ. ಈ ಕವನಗಳಲ್ಲಿ ಕವಿಗಳು ವಾಸ್ತವವನ್ನು ಸ್ವಭಾವೋಕ್ತಿಯಿಂದ ಚಿತ್ರಿಸಿದ್ದಾರೆ. ಆ ಸಾಲುಗಳಲ್ಲಿ ಬರೆದ ಕಲ್ಪಿತ ವಿಚಾರ ಸೂಕ್ತ ಪದಪ್ರಯೋಗದಿಂದ  ಕವನಗಳು ನಿರತೆಯಿಂದ ಓದುಗರ ಮನಮೀಟುತ್ತವೆ.
...ವಿದ್ಯಾಧರ ದುರ್ಗೇಕರ

Comments