ಝಳಝಳಝಳ ನಾದದಲಿ ಹೃದಯದ ಕಲರವ
ಢವಢವಢವ ರಾಗದಲ್ಲಿ ಸುಮಧುರ ಅನುಭವ
ಢವಢವಢವ ರಾಗದಲ್ಲಿ ಸುಮಧುರ ಅನುಭವ
ಹಾಡಿದವು ಮರದಲ್ಲಿ ಜೋಡಕ್ಕಿ ಚಿಲಿಪಿಲಿ
ಜಗದೊಡನೆ ಸೇರಿ ಹರಿಸಿತು ವನಸಿರಿ
ಮುಂಗಾರಿನ ಹನಿಗಳಲ್ಲಿ ಹಸಿರಿನ ಸಂಬ್ರಮ
ಮೋಡದ ತಂಪಲಿ ಅನುರಾಗ ಅನುಪಮ
ಜಗದೊಡನೆ ಸೇರಿ ಹರಿಸಿತು ವನಸಿರಿ
ಮುಂಗಾರಿನ ಹನಿಗಳಲ್ಲಿ ಹಸಿರಿನ ಸಂಬ್ರಮ
ಮೋಡದ ತಂಪಲಿ ಅನುರಾಗ ಅನುಪಮ
ಝಳಝಳಝಳ ನಾದದಲಿ ಹೃದಯದ ಕಲರವ
ಢವಢವಢವ ರಾಗದಲ್ಲಿ ಸುಮಧುರ ಅನುಭವ
ಢವಢವಢವ ರಾಗದಲ್ಲಿ ಸುಮಧುರ ಅನುಭವ
ಬೀಸುವ ತಂಗಾಳಿಯಲ್ಲಿ ಕೇಳಿತವನ ಗಾನ
ತೇಲಾಡುವ ನೀರಲ್ಲಿ ಕಂಡೆನವನ ನಯನ
ಸದ್ದಿಲ್ಲದ ಸುದ್ದಿಯಲ್ಲಿ ಹಾಡಿದನವನು ಕವನ
ಆ ಒಲವಿನ ಸಾಲಲ್ಲಿ ಆಕಾಶದ ಉಡ್ಡೀನ
ತೇಲಾಡುವ ನೀರಲ್ಲಿ ಕಂಡೆನವನ ನಯನ
ಸದ್ದಿಲ್ಲದ ಸುದ್ದಿಯಲ್ಲಿ ಹಾಡಿದನವನು ಕವನ
ಆ ಒಲವಿನ ಸಾಲಲ್ಲಿ ಆಕಾಶದ ಉಡ್ಡೀನ
ಝಳಝಳಝಳ ನಾದದಲಿ ಹೃದಯದ ಕಲರವ
ಢವಢವಢವ ರಾಗದಲ್ಲಿ ಸುಮಧುರ ಅನುಭವ
ಢವಢವಢವ ರಾಗದಲ್ಲಿ ಸುಮಧುರ ಅನುಭವ
ಬರುವನು ನಸುಕಿನಲಿ ರವಿ ರಷ್ಮಿಯ ಹೊತ್ತು
ತರುವನು ನನ್ನವನು ಕನಸೊಂದು ಹೊಸತು
ಗಂಭೀರ ಭಂಗಿಯ ನೋಟದಲಿ ಬೆಸೆದು
ನನ್ನೆದೆ ತೋಟದಲಿ ಹೂಮಾಲೆ ಹೊಸೆದು
ತರುವನು ನನ್ನವನು ಕನಸೊಂದು ಹೊಸತು
ಗಂಭೀರ ಭಂಗಿಯ ನೋಟದಲಿ ಬೆಸೆದು
ನನ್ನೆದೆ ತೋಟದಲಿ ಹೂಮಾಲೆ ಹೊಸೆದು
ಝಳಝಳಝಳ ನಾದದಲಿ ಹೃದಯದ ಕಲರವ
ಢವಢವಢವ ರಾಗದಲ್ಲಿ ಸುಮಧುರ ಅನುಭವ
ಢವಢವಢವ ರಾಗದಲ್ಲಿ ಸುಮಧುರ ಅನುಭವ
ನನ್ನೊಲವಿನ ನೋವು ಅವನಸೇರಿ ಶಮನ
ಸುಂದರನ ನೋಟವು ನನ್ನೊಡಲಿಗೆ ಓದನ
ಸೆರೆಯಾದನವನು ನನ್ನೊಟದ ಕಣ್ಣಲಿ
ಹೂವಾಗಿ ನೆಲೆಸುವೆ ನಾನವನ ಎದೆಯಲ್ಲಿ
ಸುಂದರನ ನೋಟವು ನನ್ನೊಡಲಿಗೆ ಓದನ
ಸೆರೆಯಾದನವನು ನನ್ನೊಟದ ಕಣ್ಣಲಿ
ಹೂವಾಗಿ ನೆಲೆಸುವೆ ನಾನವನ ಎದೆಯಲ್ಲಿ
ಝಳಝಳಝಳ ನಾದದಲಿ ಹೃದಯದ ಕಲರವ
ಢವಢವಢವ ರಾಗದಲ್ಲಿ ಸುಮಧುರ ಅನುಭವ
ಢವಢವಢವ ರಾಗದಲ್ಲಿ ಸುಮಧುರ ಅನುಭವ
....ವಿದ್ಯಾಧರ ದುರ್ಗೇಕರ
Comments
Post a Comment