ಕನ್ನಡ ಸಾಹಿತ್ಯ
ಸಾಹಿತ್ಯ ಅಂದರೆ ಸೃಜನಶೀಲ ಬರವಣಿಗೆ. ಜನಮಾನಸದ ನಿರಂತರತೆಯನ್ನು ಕಾಪಾಡಿ ಮನಮುಟ್ಟುವ ರಚನೆ. ಈಗಿನ ತಲೆಮಾರಿನ ತಂತ್ರಯುಗದ ಒತ್ತಡದಲ್ಲಿ ಸಾಹಿತ್ಯದ ಬದಲಾವಣೆಯ ಅಗತ್ಯ ಇದೆಯೆ ಅಂತ ಪರಿಶೀಲಿಸುವುದು ಅಗತ್ಯ. ಬದಲಾಗದ ಭಾಷೆ ಸಂಸ್ಕೃತಿ ಅಳಿಸಿಹೋಗಿರುವ ಉದಾಹರಣೆಗಳು ಇತಿಹಾಸದ ಪುಟದಲ್ಲಿ ಸಿಗಬಹುದು.ನಮ್ಮ ಜನರೆಲ್ಲ ಬುದ್ದಿವಂತರು.ಅವರಿಗೆ ಸಾಹಿತ್ಯ ಇಷ್ಟವಾದರೆ ಇಲ್ಲವೆ ಉಪಯುಕ್ತವಿದ್ದರೆ ಅದನ್ನು ಪ್ರೇರಿಸುತ್ತಾರೆ.ಇಲ್ಲ ಬಿಟ್ಟು ಬೆರೆ ಎಲ್ಲೊ ಬೇರೆ ದ್ರಷ್ಯ ಮಾಧ್ಮದೆಡೆಗೆ ನೋಡುತ್ತಾರೆ.ಒತ್ತಾಯದಿಂದ ಎನು ಸಾಧಿಸಲು ಸಾಧ್ಯವಿಲ್ಲ. ಸಾಹಿತ್ಯವು ಅವರ ಅಂತರಾಳಕ್ಕೆ ಮುಟ್ಟಬೇಕು. ಭಾಷಾ ಪಂಡಿತರ ನಿಯಮಗಳಿಂದ ಶೃಂಗರಿಸಿ ಒತ್ತಾಯಪೂರ್ವಕವಾಗಿ ಅವರ ಮೇಲೆ ಹೇರಿದರೆ ಅವರು ಖಂಡಿತವಾಗಿ ಬೇರೆ ಮಾಧ್ಯಮದೆಡೆಗೆ ಓಲೈಸುತ್ತಾರೆ.
ಪಂಪರಿಂದ ಕುವೆಂಪುರವರ ಕಾವ್ಯದಿಂದ ಇಂದಿನ ಕಾವ್ಯದವರೆಗು ಕನ್ನಡ ಭಾಷೆ ಮಹಾನ್ ಕವಿಗಳನ್ನು ಕಂಡು ದೇಶ ವಿದೇಶಗಳಲ್ಲಿ ತನ್ನದೆ ಆದ ಪ್ರಭಾವಬೀರಿದೆ. ಕಾವ್ಯ ಕವನಗಳು ಜನಸಾಮಾನ್ಯರ ಭಾವ ನುಡಿಗಳಲ್ಲಿ ಜನಿಸಿ ರಾಜರಾಸ್ಥಾನ ದಿಂದ ರಾಜಕೀಯ ಒಳಗೂಡಿಸಿ, ಮಹಾವಿದ್ಯಾಲಯ ಮತ್ತು ವಿಮರ್ಶಕರಿಂದ ಪ್ರೌಡಿಮೆ ಗಳಿಸಿ ಬೆಳೆದು ಹಬ್ಬಿದೆ.
ಹಾಗೆಯೆ ಸಮಾಜದ ಕೆಲವು ಪ್ರಬಲ ಗುಂಪಗಳ ಹತೋಟಿಯಲ್ಲೆ ಉಳಿಯಿತು. ಆದ್ದರಿಂದ ನಮ್ಮಲ್ಲಿ ಜನ ಸಾಮಾನ್ಯರ ಭಾಷಾ ಸಾಹಿತ್ಯವನ್ನು ಜನಪದವೆಂದು ಬದಿಗಿಟ್ಟು ಆಸ್ಥಾನ ಮತ್ತು ವಿಶ್್ವವಿದ್ಯಾಲಯದಲ್ಲಿ ಪರಿಗಣಿಸಿದ ಸಾಹಿತ್ಯವೆ ಶ್ರೇಷ್ಟ ಸಾಹಿತ್ಯವೆಂದು ಪರಿಗಣಿಸುವುದು ಇಂದಿನ ಬದಲಾದ ಯುಗಕ್ಕೆ ಉಚಿತವ್ಲವೆಂದು ಅನ್ನಿಸುತ್ತದೆ.ಸಾಹಿತ್ಯವಾದ ಜನಪದವನ್ನು ಎಲ್ಲೊ ಮರೆತು ಕೊನೆಗೆ ಸ್ವಾತಂತ್ರನಂತರ ಹಿಂದಿನ ಸಾಲಿನಲ್ಲಿಟ್ಟು ಬಂದಿದ್ದೇವೆ. ಊರ ಭಾಷೆಯನ್ನು ಅಶುದ್ದ ಭಾಷೆಯೆಂದು ಹೀನ ದೃಷ್ಟಿಯಿಂದ ನೋಡಿ ಗಡಿಜಿಲ್ಲೆಯ ಕನ್ನಡಿಗರು ಪರಭಾಷೆಗೆ ಮೊರೆ ಹೊಗಿರುವ ಉದಾರಹಣೆಗಳು ಇವೆ.ಯಾವುದೆ ಸಾಹಿತ್ಯ ಜನಸಾಮಾನ್ಯರ ಭಾವನೆಗೆ ಸ್ಪಂದಿಸಬೇಕೆ ವಿನಃ ಭಾಷಾಪ್ರೌಡಿಮೆಯ ಗೊಂದಲದಲ್ಲಿ ಕೆಲವರಿಗಷ್ಟೆ ಸೀಮಿತವಾಗಕೂಡದು. ಈ ಧೋರಣೆ ಜಗತ್ತಿನಾದ್ಯಂತ ಬದಲಾಗುವುದು ಕಂಡು ಬರುತ್ತಿದೆ. ಜನಪ್ರಿಯ ಲಿರಿಸಿಸ್ಟ ಬೊಬ್ ಡೈಲಾನರವರ ಕವನಗಳಿಗೆ ಸಿಕ್ಕಿದ ನೊಬೆಲ್ ಪಾರಿತೋಷಕ ಒಂದು ಉದಾಹರಣೆ.
ಕನ್ನಡ ಭಾಷಾ ನಿಘಂಟುಗಳಲ್ಲಿ ಮತ್ತು ವ್ಯಾಕರಣದಲ್ಲಿ ಸಂಸ್ಕೃತ ಪ್ರಭಾವ ಹೆಚ್ಚಿದ್ದು, ಅದರ ಉಪಯೋಗ ಮಾಡಿದರೆ ಉತ್ತಮ ಕನ್ನಡ ಇಲ್ಲವೆ ಅದು ಅಶುದ್ಧ ಕನ್ನಡ ಹೇಳಿ ಕನ್ನಡಿಗರಿಗೆ ಅವಮಾನಿಸುವದೊಂದು ದುರಾದ್ರಷ್ಟ. ಸಂಸ್ಕೃತ ಪ್ರಭಾವಿತ ಕನ್ನಡದಿಂದ ನಾವಾಡುವ ಜನಸಾಮಾನ್ಯರ ಕನ್ನಡ ಎಲ್ಲೊ ಬಿಟ್ಟು ಹೋಗುತ್ತಿದೆ. ಕನ್ನಡಿಗರು ಹೀನಭಾವದಿಂದ ಪರಬಾಷೆಗೆ ಮೊರೆಹೋಗಿದ್ದ ಉದಾಹರಣೆಗಳು ಗಡಿನಾಡು ಜಿಲ್ಲೆಗಳಲ್ಲಿವೆ. ಪ್ರತಿಯೊಂದು ಭಾಷೆಯು ಪರಭಾಷೆಯೊಡನೆ ಬೆರೆತು ಬೆಳೆಯಬೇಕು. ಆದರೆ ಪ್ರಭಾವಿ ಪರಭಾಷೆಯ ಉಪಯೋಗವೆ ಭಾಷೆಯ ಪ್ರೌಢಮೆ ಹೇಳುವುದರಲ್ಲಿ ಅರ್ಥವಿಲ್ಲ. ನಾನಾಡುವ ನುಡಿಯೆ ಕನ್ನಡ ನುಡಿ. ನಾನಾಡುವ ಕನ್ನಡವೆ ಶ್ರೇಷ್ಠ ಕನ್ನಡ....
ಈ ದೃಷ್ಟಿಯಲ್ಲಿ ಪ್ರತಿಯೊಬ್ಬ ಕನ್ನಡಿಗ ಸಾಹಿತ್ಯದ ಸೇವೆ ಮಾಡಿ ಕನ್ನಡದ ಸಿರಿಯನ್ನು ಜಗತ್ತಿನಾದ್ಯಂತ ಹರಡಲು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ
ವಿದ್ಯಾಧರ ದುರ್ಗೆಕರ
Comments
Post a Comment