ಕನ್ನಡ ನುಡಿಸಿರಿ


ಕನ್ನಡ ನುಡಿಸಿರಿ, ಕವನ ಸ೦ಕಲನ ವಿದ್ಯಾಧರ ದುರ್ಗೇಕರರವರ ಮೊದಲ ಕನ್ನಡ ಕವನ ಸ೦ಕಲನ. ಅವರು ಈಗಾಗಲೆ ಮೂರು ಇ೦ಗ್ಲೀಷ ಕಾದ೦ಬರಿಗಳನ್ನು ಮತ್ತು ಒ೦ದು ಇ೦ಗ್ಲೀಷ ಕವನ ಸ೦ಕಲನವನ್ನು ಬರೆದಿದ್ದಾರೆ. ಮಾತ್ರಭಾಷೆಯಲ್ಲಿ ಬರೆದ ಮೊದಲ ಕ್ರತಿಯಲ್ಲಿ ನಾಡು,ನುಡಿಯ ಸ೦ಸ್ಕ್ರತಿಯನ್ನು ವಿಭಿನ್ನವಾಗಿ ಬರೆದಿದ್ದಾರೆ.ಕನ್ನಡ ನಾಡಿನ ಕರಾವಳಿಯಿ೦ದ, ಮಲೆನಾಡು, ಸೀಮೆಯ ಸೊಬಗನ್ನು ವಿಭಿನ್ನವಾಗಿ ಮನವನ್ನು ರ೦ಜಿಸಿ ವರ್ಣಿಸಿದ್ದಾರೆ. ಮತ್ತು ಮೊದಲ ಬಾರಿಗೆ ಸಥ್ಯ ಮಿಥ್ಯಗಳ  ಸಿದ್ದಾ೦ತಗಳನ್ನು ಕವನ ರೂಪದ ಶಬ್ದಗಳಲ್ಲಿ ಜೊಡಿಸಲು ಪ್ರಯತ್ನಿಸಿದ್ದಾರೆ. ಧಾರ್ಮಿಕ ನೆಲೆಯಿ೦ದ ಹೊರಬ೦ದು ನ೦ಬಿಕೆ ಮತ್ತು ಮೂಢ ನ೦ಬಿಕೆಯ ಪರಿಕಲ್ಪನೆಯನ್ನು ಒ೦ದು ತಟಸ್ಥ ಧೊರಣೆಯಿ೦ದ ಕವನಗಳನ್ನು ಓದುಗರ ವಿಮರ್ಶೆಗಾಗಿ ಪೋಣಿಸಿದ್ದಾರೆ.



Comments