ಜೀವಾತ್ಮಗಳ ವಿಕ್ರಯ


ಜೀವಾತ್ಮಗಳ ವಿಕ್ರಯ ಕಾದಂಬರಿಯು ನಮ್ಮ ದೇಶದ ಭೂಸ್ವಾಧೀನ ಮಾಡುವ ವ್ಯವಸ್ಥೆಯ ಹಿನ್ನೆಲೆಯಲ್ಲಿ ನಡೆದ ಹಳ್ಳಿಯ ಯುವಕರ ಅಪೂರ್ವ ಮುಗ್ಧ  ಪ್ರೇಮದ ಕಲ್ಪಿತ ವರ್ಣನೆ. ತಮ್ಮ ಪೂರ್ವಜರ ಮನೆ ಮಠ ಮತ್ತು ಪರಂಪರೆಯ ಆಸ್ಥಿಯ  ಹಳ್ಳಿಗಳನ್ನು ಉಳಿಸಿಕೊಳ್ಳಲು ಇಂದಿಗೂ ನಡೆದಿರುವ ಹೋರಾಟದ ಕತೆ ಇದು. ರೋಶನಿ ಎಂಬ ಹಳ್ಳಿಯ ತರುಣಿ  ವಕೀಲೆ ಮುಗ್ಧ ಹಳ್ಳಿಗರೊಂದಿಗೆ ಕೈಜೋಡಿಸಿ ಅವರ ಪೂರ್ವಜರ ಹಳ್ಳಿಗಳನ್ನು ಉಳಿಸಿಕೊಳ್ಳಲು ಶಕ್ತಿಶಾಲಿ ಪ್ರಭಾವಿ ಶ್ರೀಮಂತ ಉಧ್ಯಮಿ ಮತ್ತು ರಾಜಕಾರಣಿಗಳೊಡನೆ ಸಮರ ಸಾರುತ್ತ ಸಮರನ ಪ್ರೇಮದಲ್ಲಿ ಸೆರೆಯಾಗುತ್ತಾಳೆ. ಸಮರ ಅದೆ ಊರಿನ ವಿದ್ಯಾವಂತ ಯುವಕ ಪ್ರಾದ್ಯಾಪಕ ಶಾಂತಿಯುತವಾಗಿ, ಈ ಸಮಸ್ಯೆಗೆ ಪರಿಹಾರ ಕಾಣಲು ರೋಶನಿಯೊಂದಿಗೆ ನಿಂತು ಹೋರಾಟದ ಸನ್ನಿವೇಶದಲ್ಲಿ ಪಾಲುದಾರನಾಗಿ ಅವಳ ಸ್ನೇಹ ಪ್ರೇಮವಾಗಿ ಚಿಗುರೊಡೆಯುತ್ತದೆ.
ಭಾರತ ದೇಶದ ಅಭಿವದ್ಧಿಗಾಗಿ ಮಾಡಿದ ಭೂಸ್ವಾಧೀನದ ಸಮಸ್ಯೆಗಳನ್ನು ಪರಿಗಣಿಸಿ, ಈ ಕಾದಂಬರಿಯನ್ನು ಉತ್ತರ ಕನ್ನಡ ಜಿಲ್ಲೆಯ ಸೃಷ್ಠಿ ಸೌಂದರ್ಯದ ತಾಣವಾದ ಕಾರವಾರದ ಮೂರು ಹಳ್ಳಿಗಳು,ನಂದಿಗ್ರಾಮ,ಕುಡಾಂಕುಲಮ ಮತ್ತು ದೇಶದ ಇತರ ಪ್ರಾಂತಗಳಲ್ಲಿ ಭೂಸ್ವಾಧೀನವಾದ ಸನ್ನೀವೇಷದದೊಂದಿಗೆ ವರ್ಣಿಸಿ ಬರೆಯಲಾಗಿದೆ. ದೂರದ ಕೊಂಪೆಯೊಂದರಲ್ಲಿ ಈ ವೈವಿಧ್ಯಮಯವಾದ ಸುಂದರ ಪರಿಸರದ ಊರುಗಳು ಭೂಸ್ವಾಧೀನಕ್ಕೆ ಒಳಪಟ್ಟು ಅನುಭವಿಸಿದ ಕಷ್ಟದೊಂದಿಗೆ ಹೋರಾಟವು ಕಥಾವಸ್ತುವಾಗಿ ಈ ಕಾದಂಬರಿಯನ್ನು ಮೆರಗುಗೊಳಿಸುತ್ತದೆ.  ಇದೊಂದು ಅತಿ ಸೂಕ್ಷ್ಮ ವಿಷಯದ ಪ್ರಾರ್ಥನೆಯಾಗಿದ್ದು ಬಡತನದ ವಿರುದ್ಧ ಅಭಿವದ್ಧಿ ಮತ್ತು ಪರಿಸರದ ದ್ವಂದ್ವದ ಸುತ್ತ ನಡೆದಿರುವ ಸ್ವಾರಸ್ಯಕರ ಸಂಘರ್ಷದ ಸನ್ನಿವೇಷದ ಕಾದಂಬರಿ. ನಮ್ಮ ದೇಶದ ಬಡತನವನ್ನು ನಿವಾರಿಸಲು ಅಭಿವದ್ಧಿ ಮಾಡಿ ಪರಿಸರಕ್ಕೆ ಹಾನಿ ಮಾಡುವುದು ಸೂಕ್ತವೊ? ಅಥವಾ ಅಭಿವದ್ಧಿ ಬೇಡವೊ? ಇದು ಓದುಗರ ವಿವೇಕದ ಚಿಂತನೆಗೆ ಸಮರ್ಪಿತ.

ಈ ಕಾದಂಬರಿಯ ಕುರಿತು ನಿವೃತ್ತ ಉಚ್ಛನ್ಯಾಯಾಲಯದ ನ್ಯಾಯಾಧೀಷ ಮತ್ತು ಕರ್ನಾಟಕದ ಲೋಕ ಆಯುಕ್ತರಾದ ಶ್ರೀ ಸಂತೋಷ ಹೆಗ್ಡೆಯವರು ಪ್ರಶಂಸಿದ್ದಾರೆ.
" ಈ ಕಾದಂಬರಿಯು ಸಮಕಾಲೀನ ಹೃದಯಂಗಮದ ಅತ್ಯಮೂಲ್ಯವಾಗಿ ಓದಿಸಿಕೊಂಡು ಹೋಗುವ ಶ್ರೇಷ್ಟ ಸಮಾಜಮುಖಿ ನೈಜ ಜೀವನದ ಸಂಘರ್ಷಗಳಿಗೆ ಸಂಬಂಧಿಸಿದ ಪುಸ್ತಕವಾಗಿದೆ."

ಕಾದಂಬರಿಯ ಕುರಿತು ಡೆಕ್ಕನ ಕೃನಿಕಲ್ ದಿನ ಪತ್ರಿಕೆಯ ಪ್ರಶಂಸೆ.
" ಜೀವಾತ್ಮಗಳ ವಿಕೃಯದ ಶಿರೋನಾಮೆಯಲ್ಲಿ ಸಮಗೃ ಸಾರಾಂಶ ಅಡಗಿದೆ. ಇದೊಂದು ಮಹತ್ವದ ಕಥೆ."

Comments