ಕಾರವಾರದಲ್ಲಿ ಸಾಗರಮಾಲಾ ಯೋಜನೆ

ಕಾರವಾರದಲ್ಲಿ ಸಾಗರಮಾಲಾ ಯೋಜನೆ

ಅಭಿವೃದ್ಧಿ ಆಗಬೇಕು ಪ್ರತಿಯೊಬ್ಬ ಯುವಕರಿಗೆ ಕೆಲಸ ಸಿಗಲು. ಪರಿಸರವೂ ಉಳಿಸಬೇಕು ಮುಂದಿನ ಪೀಳಿಗೆಗೆ ವಹಿಸಲು. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಬೇಕು. ನಮ್ಮವರ ಸುಳ್ಳು ವರದಿ ಆಧರಿಸಿ ಅಭಿವೃದ್ಧಿ ಮಾಡುವುದು ಅಭಿವೃದ್ಧಿ ಅಲ್ಲ ವಿನಾಶಕ್ಕೆ ದಾರಿ. ಮೂವತ್ತು ವರ್ಷಗಳ ಹಿಂದೆ ದೇಶದ ರಕ್ಷಣೆಗಾಗಿ ನಾವು ತ್ಯಾಗ ಮಾಡಿದ ಸೀಬರ್ಡಗಾಗಿ ಅತಿಕ್ರಮಿಸಿ ಮೂವತ್ತು ವರ್ಷಗಳಾದರೂ ಬರೀ ಪ್ತತಿಶತ ಹತ್ತಿಪ್ಪತ್ತು ಭಾಗ ಮಾತ್ರ ಉಪಯೋಗವಾಗುತ್ತಿದೆ ಅಂದರೆ ಪೂರ್ತಿ ಉಪಯೋಗವಾಗಲು ಮುನ್ನೂರು ವರ್ಷಗಳ ಬೇಕು. ಇವರು ಮಾಡುವುದು ಅಭಿವೃದ್ಧಿಯೇ? ಅಥವಾ ಅಧಿಕಾರದ ದುರುಪಯೋಗವೇ?ಅಥವಾ ಬ್ರಷ್ಟಾಚಾರಕ್ಕೆ ಸುಲಭ ಮಾರ್ಗವೇ? ತಿಳಿದವರು ಅರ್ಥ ಮಾಡಿಕೊಳ್ಳಬೇಕು. ಬಂದರು ಎಲ್ಲಾದರೂ ಹೇಗಾದರೂ ಕಟ್ಟಬಹುದು ಆದರೆ ಸಮುದ್ರ ದಂಡೆ ಅಂದರೆ ಬೇಲೆಯನ್ನು ಮನುಷ್ಯ ನಿರ್ಮಿಸಲಾಗದು. ಇರುವ ಒಂದು ಪ್ರಾಕೃತಿಕ ಸೊತ್ತನ್ನು ನಾಶ ಮಾಡಿ ನಾವು ಸಾಧಿಸುವುದೇನಿಲ್ಲ.ಬಂದರು ಅಧಿಕಾರಿಗಳು ಸಲ್ಲಿಸಿದ ವರದಿಗಳಲ್ಲಿ ಹೆಚ್ಚಾಗಿ ಸುಳ್ಳೆ ಇರುವುದರಿಂದ ಅಧಿಕಾರಿಗಳನ್ನು ನಂಬಲಾಗುವುದಿಲ್ಲ. ಯೋಜನೆಯಿಂದ ಪರಿಸರ ಹಾನಿ ಖಚಿತ ಮತ್ತು ಉದ್ಯೋಗವಕಾಶ ಊರವರಿಗೆ ಸಿಗುವುದು ಸಂಶಯಾಸ್ಪದ. ಯಾಕೆಂದರೆ ಕೊಂಕಣ ರೇಲ್ವೆ ಮತ್ತು ಸೀಬರ್ಡನಲ್ಲಿ ಹತ್ತು ಪ್ರತಿಶತ ದಿನಕೂಲಿ ನೌಕರಿ ಬಿಟ್ಟರೆ ಮೇಲಿನ ಕೆಲಸವೆಲ್ಲ ಹೊರ ರಾಜ್ಯದವರಿಗೆ ಮೀಸಲಾಗಿದೆ.
ಅಂದು ಬಂದರು ಇಲಾಖೆಯ ಬೈತಕೋಲನಲ್ಲಿರುವ ಒಂದು ಸಮುದ್ರದಂಡೆಯನ್ನು ರಕ್ಷಣಾ ಇಲಾಖೆಯ ಐಷಾರಾಮಿ ಆಫೀಸ ಕಟ್ಟಲು ವಹಿಸಿ ಕೊಟ್ಟು ಈಗ ಬಡ ಜನರ ಭೂಮಿ ಮತ್ತು ಸಾಗರವನ್ನು ಒತ್ತಾಯದಿಂದ ಕಾನೂನು ಉಲ್ಲಂಘಿಸಿ ಅತಿಕ್ರಮಿಸಿ ಎರಡನೆ ಹಂತವನ್ನು ಕಟ್ಟಲು ಆರಂಭಿಸಿದ್ದು ಅಧಿಕಾರದ ದುರುಪಯೋಗವಲ್ಲವೇ?
ಪ್ರಾಕೃತಿಕ ಸೊತ್ತನ್ನು ಅತಿ ಅವಶ್ಯ ಇರುವ ಕೆಲಸಕ್ಕೆ ಮಾತ್ರ ಉಪಯೋಗಿಸಿಕೊಂಡರೆ ಮಾತ್ರ ಭವಿಷ್ಯದ ಪೀಳಿಗೆಗೆ ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸಬಹುದು.

ಅಥವಾ ಬ್ರಷ್ಟಾಚಾಕ್ಕೆ ಸುಲಭ ದಾರಿಯೇ? ನೀವೇ ಯೋಚಿಸಿ…..ವಿದ್ಯಾಧರ ದುರ್ಗೆಕರ -ಕಾದಂಬರಿಕಾರ-ಜೀವಾತ್ಮಗಳ ವಿಕ್ರಯ-ಕನ್ನಡ ನುಡಿಸಿರಿ

Comments