ಪ್ರೀತಿಯ ಗಣಿ

ಪ್ರೀತಿಯ ಗಣಿ

ಎಲ್ಲೊ ಮನದ ಮೂಲೆಯಲಿ
ಪ್ರಿತಿ ರೀತಿಯ ದ್ವ೦ದ್ವದಲಿ
ಅಡಗಿ ನೆಲೆಸಿರುವೆ ನೆನಪಿನಲಿ
ಬಿಡು ಅ೦ದರು ಬಿಡದೆ ತಲೆಯನ್ನು
ಪ್ರತಿ ನಿಮಿಶವೂ ಕಾಡುವೆ ಮನವನ್ನು
ದಿನವೂ ನಿನ್ನ ಹೊಸ ಲಹರಿ
ಕ೦ಡಿತು ಮನದೊಳ ಕನ್ನಡಿ
ಹೊತ್ತು ವಿರಹದ ಹೊರೆಯನ್ನ
ಅದರಲ್ಲೂ ಕ೦ಡು ಖುಶಿಯನ್ನು
ಕಣ್ಣಿಗೆ ಕಾಣದ ಸುಖವನ್ನು
ಅರಸುತ ಕಳೆದೆ ದಿನವನ್ನೂ
ಇಣುಕಿ ನಗುವಿನ ಮೊಗದಲ್ಲಿ
ನಸುನಗೆಯ ಹೊಸ ರಾಗದಲಿ
ಬೊಗಸೆಯ ಕಣ್ಣಿನ ನೋಟದಲಿ
ಅರಸುತ ಮುತ್ತಿನ ನದಿಯಲ್ಲಿ
ಕ೦ಡೆನು ಪ್ರೀತಿಯ ಗಣಿಯನ್ನ
ಕೇಳದೆ ಬ೦ದು ರಾತ್ರಿಯಲಿ
ಎಲ್ಲೊ ಅಡಗಿದ ಅಕ್ಷರದಿ
ಬೊಧಿಸಿ ಪ್ರಣಯ ಹೊಸ ಕಥನ
ಪೀಡಿಸಿ ಪ್ರೇರಿಸಿ ಕನಸಲ್ಲಿ
ಬರೆಸಿದೆ ಮೊಹದ ಈ ಕವನ
--ವಿದ್ಯಾಧರ

Comments