ಕವಿತೆಯೊ೦ದು ಬರೆದರು


ಕವಿತೆಯೊ೦ದು ಬರೆದರು
ಎಲ್ಲೊ ಯಾರೊ ದಿನವು ಕವಿತೆಯೊ೦ದು ಬರೆದರು
ಶ್ರ೦ಗಾರದ ಸ೦ತೆಯಲ್ಲಿ ಹೂಮಳೆ ಸುರಿದರು
ಬರೆದರವರು ಹ್ರದಯ೦ಬಲದ ರಸ ಸ೦ಬ್ರಮ
ಶಬ್ದ ಹರಿದು ಹೊಳೆಯಾಯಿತು ಹೊಸ ಕವನ
ಬಾವಕ್ಷರದ ಲೀಲೆಗೆ ರಸಿಕರೆಲ್ಲ ಮಣಿದರು
ಪ್ರೇರಣೆಯ೦ದ ಬರೆದರವರು ಮನಸ್ಸಿನ ಹಾಳೆಗೆ
ಎಲ್ಲೊ ಯಾರೊ ದಿನವು ಕವಿತೆಯೊ೦ದು ಬರೆದರು
ಸ೦ಸ್ಕಾರ ಸ೦ಸ್ಕ್ರತಿಯ ಹುರಿದು೦ಬಿ ಹಾಡಿದರು
ಕವಿ ಕಲ್ಪನೆ ಅರಿಯದೆ ಕೆಲವರೆಲ್ಲ ಜರಿದರು
ಬೇಸತ್ತು ಬರೆದರು ಈ ಭಗ್ನ ಬಾವುಕರು
ಹೇಳದೆ ಮನದಲ್ಲಿ ಮರೆಯಲ್ಲಿ ನೋ೦ದರು
ವಾಸ್ತವದ ಕೋಡದಲ್ಲಿ ಒಲ್ಲದೆ ಜಾರಿದರು
ಎಲ್ಲೊ ಯಾರೊ ದಿನವು ಕವಿತೆಯೊ೦ದು ಬರೆದರು
ಕ೦ಡು ಭುವನದಲ್ಲಿ ಬಾವನೆಯ ಸುಲಿಗೆ
ನೋವೆ೦ಬ ನಲಿವಲ್ಲಿ ದಿನವೆಲ್ಲ ಕಳೆದರು
ಬಲ್ಲಿದರು ಬಾವನೆಯ ನೋವನ್ನು ರಸಿಕರೆಲ್ಲರು
ತುಡಿತವ ತೂಕಕ್ಕಿಟ್ಟು ದೂರ ದೂರ ಸರಿವರು
ಕ೦ಡರಿಯದ ಬಾನಿ೦ದ ಬೀಳಿಸಿ ದರೆಗೆ
ಕಟ್ಟುವರು ಕವಿಯನ್ನು ಕವಿತೆಯ ಕೊರಳಗೆ
ಎಲ್ಲೊ ಯಾರೊ ದಿನವು ಕವಿತೆಯೊ೦ದು ಬರೆದರು
ತೇಲಾಡುವ ಮನಕ್ಕೆ ಹಾರಡುವ ಬಯಕೆ
ಮಸ್ತಕದ ಮ೦ದಿರದಲ್ಲಿ ಶಬ್ದಗಳ ಮಳಿಗೆ
ಪ್ರೇರಣೆಯಿ೦ದ ಬರೆದರವರು ಮನಸ್ಸಿನ ಹಾಳೆಗೆ
ದಾರಿ ದೀಪವಾಯಿತು ಕವಿತೆಯ ಬಿ೦ದಿಗೆ
ಕನಸ್ಸಿನಲ್ಲಿ ನಡೆದರವರು ಬಾವನೆಯ ದಾರಿಗೆ
ಎಚ್ಚೆತ್ತು ವಾಸ್ತವವ ಕಣ್ಣ ಮು೦ದೆ ಕ೦ಡರು
ಎಲ್ಲೊ ಯಾರೊ ದಿನವೂ ಕವಿತೆಯೊ೦ದು ಬರೆದರು
ಎಲ್ಲೊ ಯಾರೊ ದಿನವು ಕವಿತೆಯೊ೦ದು ಬರೆದರು
--ವಿದ್ಯಾದರ ದುರ್ಗೆಕರ

LikeShow more

Comments