ಮದುಮಗಳು


ಮದುಮಗಳು
ಮಲೆನಾಡಿನ ತವರಿನ ಮದುಮಗಳು,
ಗಿರಿ ಬನಗಳ ಬೀಡು-ಕೊಡಗು.
ನಾಡಿಗೆ ನೆರಳಾಗಿ ಬೆಳೆಸಿಹಳು,
ಹಸಿರಿನ ಸುಂದರ ಸೊಬಗು.

ಕೊಡಗಿನ ಸೊಬಗಿನ ಸಿರಿಯಲ್ಲಿ,
ಜನಿಸಿಹಳು ತಾಯಿ ಕಾವೇರಿ.
ಹರಿಯುವ ನಾಡಿನ ಹಾದಿಯಲ್ಲಿ,
ಬರೆದಿದೆ ಹಸಿರು ರಂಗೋಲಿ.

ಸುರಗಿ ಗಂಧದ ತಂಪು ನೆರಳಲ್ಲಿ,
ಅರಳಿಹವು ಕಾಫಿ ತೋಟಗಳು.
ಹಬ್ಬಿಹವು  ಮರದ ಕೊಂಬೆಯಲಿ,
ಕರಿ ಮೆಣಸಿನ ಹಸಿ ಬಳ್ಳಿಗಳು.

ಮಲೆನಾಡಿನ ಸಿರಿಯ ಗಿರಿಯಲ್ಲಿ,
ಮುಗಿಲು ಮುಟ್ಟಿವೆ ಸಾಗು ತೇಗುಗಳು.
ಕೊಡಗಿನ ಕಾಡಿನ ಮಡಿಲಲ್ಲ,
ಹುಟ್ಟಿ, ಹಾಡಿವೆ ಪ್ರಾಣಿ, ಪಕ್ಷಿಗಳು.

ಮರದ ನೇರಳಲಿ ಆಶ್ರಯ ಕೋರಿ,
ಬಂದವು ಕೊಡಗಿಗೆ ಆನೆಮರಿ.
ನಾಡಿನ ಜನತೆಗೆ ಕರುಣೆಯ ತೋರಿ,
ನೀರುಣಿಸದಳು ತಾಯಿ ಕಾವೇರಿ.

ನಾಡಿನ ಶೂರ-ವೀರ ಧೀಮಂತ ಪುತ್ರರು-
ಕರಿಯಪ್ಪ, ತಿಮ್ಮಯ್ಯ, ಅನೇಕರು.
ರಾಷ್ಟ್ರದ ವೈರಿಗಳೊಡನೆ ಹೋರಾಡಿದ
ಕೊಡಗಿನ ವೀರ ಸೈನಿಕರು.

ಕನ್ನಡ ಹಸಿರು ತೋಟದ ತವರಲ್ಲಿ,
ಅಡಗಿದೆ ನಾಡಿನ ಜೀವುಸಿರು.
ಮಲೆಗಳ  ಅಂಗಳ ಬಹ್ಮಗಿರಿಯಲಿ,
ನೆಲೆಸಿಹಳು ತಾಯಿ ಭುವನೇಶ್ವರಿ.

(C) Vidyadhar Durgekar Nov 2017

Comments